Monthly Archive: August 2012

ವೇದೋಕ್ತ ಜೀವನ ಪಥ: ಬ್ರಹ್ಮಚರ್ಯಾದಿ ಚತುರಾಶ್ರಮಗಳು – 1

  “ನಮ್ಮ ತಾತಾನೂ ಬ್ರಹ್ಮಚಾರಿ, ನನ್ನ ತಂದೇನೂ ಬ್ರಹ್ಮಚಾರಿ, ನಾನೂ ಬ್ರಹ್ಮಚಾರಿ” ಎಂದು ಹಾಸ್ಯವಾಗಿ ಹೇಳುವುದನ್ನು ಕೇಳಿಯೇ ಇರುತ್ತೇವೆ. ಈ ಹಾಸ್ಯದ ಅರ್ಥ ಬ್ರಹ್ಮಚಾರಿ ಅಂದರೆ ಕೇವಲ ಮದುವೆ ಆಗದಿರುವುದು ಅಷ್ಟೆ ಅಂತ. ನಿಜವಾದ ಬ್ರಹ್ಮಚರ್ಯ ಅಂದರೆ ಮದುವೆಯಾಗದಿರುವುದು ಮಾತ್ರ ಅಲ್ಲ. ಪರಮಾತ್ಮನ ವಿಚಾರದಲ್ಲಿ, ಆತ್ಮನ ಜ್ಞಾನದಲ್ಲಿ, ಜ್ಞಾನಾರ್ಜನೆಯಲ್ಲಿ ವಿಹರಿಸುವುದು ಎಂದು. ಇದು ಸಿದ್ಧಿಸಬೇಕಾದಲ್ಲಿ ಇಂದ್ರಿಯ ನಿಗ್ರಹ ಸಾಧಿಸುವುದು ಅತ್ಯವಶ್ಯ. ಬಾಲ್ಯಾವಸ್ಥೆಯಿಂದ ಸುಮಾರು 25ವರ್ಷಗಳವರೆಗೆ ಅಂದರೆ ಜೀವನದ ಮೊದಲ ಕಾಲುಭಾಗದ ಅವಧಿಯನ್ನು ಬ್ರಹ್ಮಚಾರಿಗಳಾಗಿ, ಜಿತೇಂದ್ರಿಯರಾಗಿ ಜ್ಞಾನಾರ್ಜನೆಯಲ್ಲಿ ತೊಡಗುವುದಕ್ಕೆ ಬ್ರಹ್ಮಚರ್ಯವೆನ್ನಬಹುದು. ಇದು ಜೀವನದ ತಳಹದಿಯೆನ್ನಬಹುದು. ಯಾರ ಜೀವನದ ತಳಪಾಯ ಚೆನ್ನಾಗಿರುವುದೋ, ಭದ್ರವಾಗಿರುವುದೋ ಅವರ ಜೀವನ ಸಹ ಸುಂದರವಾಗಿರುತ್ತದೆ. ಹಿಂದಿನ ಕಾಲದಲ್ಲಿ ಕ್ಷತ್ರಿಯರಾಗಿರಲಿ, ಬ್ರಾಹ್ಮಣರಾಗಿರಲಿ, ಯಾವುದೇ ವರ್ಣಾಶ್ರಮಕ್ಕೆ ಸೇರಿದವರಾಗಿರಲಿ, ಉಪನಯನ ಸಂಸ್ಕಾರವಾದ ತಕ್ಷಣ ಯೋಗ್ಯ ಗುರುಕುಲವನ್ನು ಸೇರಿ ಗುರುಗಳೊಂದಿಗೇ ಇದ್ದು, ಆಶ್ರಮದ ಕೆಲಸಕಾರ್ಯಗಳೊಂದಿಗೆ ಕಲಿಕೆಯನ್ನೂ ಮಾಡುತ್ತಿದ್ದರು. ಗುರುಕುಲಗಳಲ್ಲಿ ಅವರವರಿಗೆ ತಕ್ಕಂತಹ, ಅಗತ್ಯವಾದಂತಹ ಕ್ಷಾತ್ರವಿದ್ಯೆಗಳಲ್ಲದೆ, ಇತರ ಕೆಲಸಗಳನ್ನೂ ಕಲಿಯುವುದರೊಂದಿಗೆ ವೇದ ವಿದ್ಯಾಭ್ಯಾಸವನ್ನೂ ಮಾಡಿಸಲಾಗುತ್ತಿತ್ತು. ಅವರುಗಳು 25 ವರ್ಷಗಳಾಗುವ ವೇಳೆಗೆ ಅವರುಗಳು ಸಂಪೂರ್ಣ ವಿಕಸಿತ ಮಾನವರಾಗಿ, ಬಲಿಷ್ಠರಾಗಿ, ಆತ್ನಸ್ಥೈರ್ಯ ಉಳ್ಳವರಾಗಿ ಹೊರಬರುತ್ತಿದ್ದರು. ನಂತರ ಗೃಹಸ್ಥರಾಗಿ ಮುಂದಿನ ಯಶಸ್ವೀ ಜೀವನಕ್ಕೆ ಕಾಲಿಡುತ್ತಿದ್ದರು.

     ಇಂದು ಪರಿಸ್ಥಿತಿ ಹೇಗಿದೆ? ಮಕ್ಕಳು ಹುಟ್ಟುತ್ತಲೇ ಬೇಬಿ ಕೇರ್, ಡೇ ಕೇರ್ ಗಳಲ್ಲಿ ಬೆಳೆಯುತ್ತವೆ. ಹುಟ್ಟುವ ಮುನ್ನವೇ ಆ ಸಂಸ್ಥೆಗಳಿಗೆ ಲಕ್ಷಾಂತರ ರೂ.ಗಳು ಡೊನೇಶನ್ ಕೊಟ್ಟು ಜಾಗ ಕಾಯ್ದಿರಿಸಿರುತ್ತಾರೆ. ಎಲ್.ಕೆ.ಜಿ., ಯುಕೆಜಿಗಳಿಗೂ ಇದೇ ಹಣೆಬರಹ. ಅಪ್ಪ, ಅಮ್ಮ ಇಬ್ಬರೂ ದುಡಿಯಲು (?) ಹೋಗುತ್ತಾರೆ. ವೀಕೆಂಡುಗಳಲ್ಲಿ ಸುಸ್ತಾಗಿ ಗೊಣಗಾಡಿಕೊಂಡು ಕಳೆಯುತ್ತಾರೆ. ಲಕ್ಷಾಂತರ ರೂ. ಕೊಟ್ಟು ಪ್ರತಿಷ್ಠಿತವೆನ್ನುವ ಶಾಲೆಗೆ ಸೇರಿಸುವ ಕಾರಣವೂ ಸಹ ಮುಂದೆ ಮಕ್ಕಳು ಲಕ್ಷಾಂತರ ರೂ. ಸಂಪಾದಿಸಲಿ ಎಂದೇ, ಜ್ಞಾನವಂತರಾಗಲಿ, ಒಳ್ಳೆಯ ಪ್ರಜೆಗಳೆನಿಸಲಿ ಎಂದಲ್ಲ. ಅಂದರೆ ವಿದ್ಯಾಭ್ಯಾಸದ, ಜೀವನದ ಮೊದಲ ಆದ್ಯತೆ ಹಣ ಸಂಪಾದನೆ ಎಂಬುದೇ ಆಗಿದೆ. ಹೆಚ್ಚು ಅಂಕ ಗಳಿಸುವ ಆತಂಕ ಪ್ರತಿ ಪರೀಕ್ಷೆಯಲ್ಲಿ ಮಕ್ಕಳಿಗೆ ಎದುರಾಗುತ್ತದೆ. ಆತಂಕ, ಆತಂಕ, ಆತಂಕ! ಓದಲು ಆತಂಕ, ಬರೆಯಲು ಆತಂಕ, ಹೆಚ್ಚು ಅಂಕ ಗಳಿಸಲು ಆತಂಕ, ಬೇಕಾದ ಸೀಟುಗಳನ್ನು ಪಡೆಯಲು ಆತಂಕ, ಬೇಕಾದ ಶಾಲೆ ಸೇರುವ ಆತಂಕ, ಓದಿಯಾದ ಮೇಲೆ ಕೆಲಸಕ್ಕೆ ಸೇರುವ ಆತಂಕ, ಸೇರಿದ ಮೇಲೆ ಹೆಚ್ಚು ಸಂಪಾದಿಸುವ ಆತಂಕ!!  ಇಂದ್ರಿಯ ನಿಗ್ರಹ ಎಂಬುದಕ್ಕೆ ಇಂದಿನ ವಿದ್ಯಾಭ್ಯಾಸ ಕ್ರಮದಲ್ಲಿ ಅರ್ಥ ಇರುವಂತೆ ತೋರುತ್ತಿಲ್ಲ. ಪ್ರಾಥಮಿಕ ಶಾಲಾ ಹಂತದಲ್ಲೇ ಪ್ರೇಮ, ಪ್ರೀತಿ, ಕಾಮಗಳ ಸುಳಿಯಲ್ಲಿ ಸಿಲುಕುವುದನ್ನು ಕಾಣುತ್ತಿರುವ ಭಾಗ್ಯ ನಮ್ಮದು. ಇನ್ನು ಕಾಲೇಜು ಕ್ಯಾಂಪಸುಗಳಂತೂ ಪ್ರೇಮಲೋಕದ ಅಡ್ಡೆಯಾಗಿರುವುದರೊಂದಿಗೆ ಎಲ್ಲಾ ರೀತಿಯ ದುಶ್ಚಟಗಳಿಗೆ ಉಗಮಸ್ಥಾನಗಳಾಗಿವೆ. ಜೀವನದ ತಳಪಾಯವೇ ಆತಂಕದಲ್ಲಿ ಕಳೆದರೆ ಉಳಿದ ಜೀವನವೂ ಹಾಗೆಯೇ ಮುಂದುವರೆಯುತ್ತದೆ. ಬಹುತೇಕವಾಗಿ, ಮಾಡುವ ಕೆಲಸಕ್ಕೂ, ಓದಿದ ವಿದ್ಯೆಗೂ ಅರ್ಥಾರ್ಥ ಸಂಬಂಧವಿರುವುದೇ ಇಲ್ಲ. ಇನ್ನು ಹಿಂದಿನ ಕಾಲದ ಬ್ರಹ್ಮಚರ್ಯಕ್ಕೂ,, ಈಗಿನ ಸ್ಥಿತಿಗೂ ಹೋಲಿಸಲು ಸಾಧ್ಯವೇ ಇಲ್ಲ. ಹಿಂದೆ ಸಮಾಜವನ್ನು ಪೋಷಿಸುವ ನವಯುವಕ ಯುವತಿಯರು ತಯಾರಾಗುತ್ತಿದ್ದರೆ, ಇಂದು ಅಂತಹುದನ್ನು ನಿರೀಕ್ಷಿಸಲು ಸಾಧ್ಯವಿದೆಯೆ? ಬೇವಿನ ಬೀಜ ಬಿತ್ತಿ ಬೆಳೆದ ಮರದಲ್ಲಿ ಮಾವಿನಹಣ್ಣನ್ನು ನಿರೀಕ್ಷೆ ಮಾಡಬಹುದೆ? ಹೋಗಲಿ ಬಿಡಿ, ಅವರು ಪಡೆದದ್ದು ಅವರಿಗೆ, ನಾವು ಪಡೆದದ್ದು ನಮಗೆ! ಬ್ರಹ್ಮಚರ್ಯಾಶ್ರಮದ ಬಗ್ಗೆ ಪಂಡಿತ ಸುಧಾಕರ ಚತುರ್ವೇದಿಗಳು ಏನು ಹೇಳಿದ್ದಾರೆ ಎಂಬುದನ್ನು ನೋಡೋಣ ಬನ್ನಿ.

-ಕ.ವೆಂ.ನಾಗರಾಜ್.

********************

ಬ್ರಹ್ಮಚರ್ಯ  

     ಸಾಮಾನ್ಯತಃ ಮಾನವನ ಆಯಸ್ಸು ನೂರು ವರ್ಷಗಳ ಪರಿಮಿತಿಯುಳ್ಳದ್ದು. ‘ಶತಂ ಜೀವ ಶರದೋ ವರ್ಧಮಾನಃ ||’ (ಋಕ್.೧೦.೧೬೧.೪.) – ಅಭಿವೃದ್ಧಿ ಹೊಂದುತ್ತಾ ನೂರು ವರ್ಷಗಳ ಕಾಲ ಜೀವಿಸು – ಎಂಬುದು ವೇದದ ಆದೇಶ. ಸಾಫಲ್ಯವನ್ನು ಗಳಿಸುವ ಸಲುವಾಗಿ, ವೇದಗಳು ಈ ನೂರು ವರ್ಷಗಳನ್ನು ನಾಲ್ಕು ಸಮಭಾಗಗಳಾಗಿ ಭಾವಿಸಿ, ಒಂದೊಂದು ಭಾಗಕ್ಕೂ ಆಶ್ರಮ ಎಂಬ ಹೆಸರನ್ನು ಕೊಡುತ್ತವೆ. ಎಲ್ಲ ಬಗೆಯ ಶಕ್ತಿಗಳನ್ನೂ ವರ್ಧಿಸಿಕೊಳ್ಳುವ ಸಲುವಾಗಿ ಬ್ರಹ್ಮಚರ್ಯ, ವರ್ಧಿತ ಶಕ್ತಿಗಳನ್ನು ತನ್ನ ಮತ್ತು ಸಮಾಜದ ಹಿತಕ್ಕೆ ಉಪಯೋಗಿಸುವ ಸಲುವಾಗಿ ಗಾರ್ಹಸ್ಥ್ಯ, ಆಧ್ಯಾತ್ಮಿಕ ಸಾಧನೆಯೊಂದಿಗೆ, ರಾಷ್ಟ್ರದ ಮಕ್ಕಳಿಗೆ ಶಿಕ್ಷಣದಾನಕ್ಕಾಗಿ ವಾನಪ್ರಸ್ಥ ಹಾಗೂ ಸಾಂಸಾರಿಕ ಮೋಹದ ಪೂರ್ಣತ್ಯಾಗ ಮಾಡಿ, ಆಧ್ಯಾತ್ಮಿಕ ಸಾಧನೆ ಮಾಡುತ್ತಾ ಜಗದುಪಕಾರಾರ್ಥವಾಗಿ ಸದ್ಧರ್ಮ ಪ್ರಚಾರ ಮಾಡುವುದಕ್ಕಾಗಿ ಸಂನ್ಯಾಸ. ಹೀಗೆ ವೈದಿಕ ಧರ್ಮ ನಾಲ್ಕು ಆಶ್ರಮಗಳನ್ನು ವಿಧಿಸುತ್ತದೆ.

     ಜನ್ಮದಿಂದಾರಂಭಿಸಿ, 25 ವರ್ಷ ಪೂರ್ತಿಯಾಗುವವರೆಗೆ, ಮಾನವನು ಬ್ರಹ್ಮಚಯಶ್ರಮವನ್ನು ಪಾಲಿಸಬೆಕು. ಬ್ರಹ್ಮಚರ್ಯ ಎಂಬ ಶಬ್ದದ ಆರ್ಥ, ಪರಮಾತ್ಮನಲ್ಲಿ ಮತ್ತು ವೇದಗಳಲ್ಲಿ ವಿಹಾರ, ವಿಹರಿಸುವುದು ಎಂದಾಗುತ್ತದೆ. ಈ ಮಹೋಚ್ಚವಾದ ಗುರಿಯನ್ನು ಮುಟ್ಟಬೇಕಾದರೆ, ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಯು ಪೂರ್ಣತಃ ಜಿತೇಂದ್ರಿಯರಾಗಬೇಕಾದುದು ಅನಿವಾರ್ಯ. ಇದೇ ಕಾರಣದಿಂದ, ಬ್ರಹ್ಮಚರ್ಯ ಎಂಬ ಶಬ್ದಕ್ಕೆ ಸಾಧಾರಣತಃ ಇಂದ್ರಿಯ ನಿಗ್ರಹ ಎಂಬರ್ಥ ಕೊಡಲ್ಪಡುತ್ತದೆ.

     ಬಾಲಕ ಮತ್ತು ಬಾಲಿಕೆಯು ಎಂಟು ವರ್ಷ ಪ್ರಾಯದವರಾದಾಗ, ಅವರ ಉಪನಯನ ಸಂಸ್ಕಾರವಾಗಿ, ವೇದಾರಂಭವೂ ನಡೆದು ಅವರು ಗುರುಕುಲವನ್ನು ಸೇರುತ್ತಾರೆ. ಪ್ರಾಪಂಚಿಕ ಹವ್ಯಾಸಗಳಿಂದ ಮತ್ತು ಪ್ರಲೋಭನಕಾರೀ ವಾತಾವರಣದಿಂದ ದೂರವಿದ್ದು, ಆಧ್ಯಾತ್ಮಿಕವಾದ ಸಾತ್ವಿಕ ವಾಯುಮಂಡಲದಲ್ಲಿ ಸ್ವತಃ ಶ್ರಮಸಹಿಷ್ಣುಗಳಾಗಿ, ತಮ್ಮ ಬೌದ್ಧಿಕ ಹಾಗೂ ಮಾನಸಿಕ ಶಕ್ತಿಗಳನ್ನು ಏಕೀಕರಿಸಿ, ವೇದವಿದ್ಯೆ ಹಾಗೂ ಲೌಕಿಕವಿದ್ಯೆಗಳನ್ನು ಕರಗತ ಮಾಡಿಕೊಳ್ಳುತ್ತಾರೆ. ಸರಳ ಜೀವನ, ಉದಾತ್ತ ವಿಚಾರ – ಎಂಬ ಕಥನಕ್ಕೆ ತಥ್ಯದ ರೂಪ ನೀಡುತ್ತಾರೆ. ಸದಾಚಾರಿಗಳೂ, ಬ್ರಹ್ಮನಿಷ್ಠರೂ, ಶ್ರೋತ್ರೀಯರೂ ಆದ ಆಚಾರ್ಯರ ಅಧೀನದಲ್ಲಿದ್ದು ಸ್ವತಃ ಸಚ್ಚರಿತ್ರರೂ, ಶರೀರಾತ್ಮ-ಬುದ್ಧಿ-ಮನೋಬಲಯುಕ್ತರೂ, ಗಂಭೀರ ವಿದ್ವಾಂಸರೂ, ಆಜೀವಿಕಾ ಸಂಪಾದನ ಸಮರ್ಥರೂ ಆಗುತ್ತಾರೆ. ಸಂಯಮಿಗಳಾಗಿ ಸರ್ವವಿಧ ಶಕ್ತಿಗಳ ಸಂಚಯವನ್ನೂ ಮಾಡಿಕೊಳ್ಳುತ್ತಾರೆ. ಅಥರ್ವವೇದದ ಮಾತುಗಳಲ್ಲಿ ಅವರ ಸ್ವರೂಪ ಹೀಗಿರುತ್ತದೆ:

ಬ್ರಹ್ಮಚಾರೀ ಬ್ರಹ್ಮ ಭ್ರಾಜದ್ಭಿಭರ್ತಿ ತಸ್ಮಿನ್ದೇವಾ ಅಧಿ ವಿಶ್ವೇ ಸಮೋತಾಃ |

ಪ್ರಾಣಾಪಾನೌ ಜನಯನ್ನಾದ್ವ್ಯಾನಂ ವಾಚಂ ಮನೋ ಹೃದಯಂ ಬ್ರಹ್ಮ ಮೇಧಾಮ್ || (ಅಥರ್ವ.೧೧.೫.೨೪.)

     [ಬ್ರಹ್ಮಚಾರೀ] ಬ್ರಹ್ಮಚಾರಿಯು [ಪ್ರಾಣಾಪಾನೌ ವ್ಯಾನಮ್] ಪ್ರಾಣ, ಅಪಾನ ಮತ್ತು ವ್ಯಾನ, ಈ ಮೂರು ಪ್ರಾಣ ಸಕ್ತಿಗಳನ್ನೂ, [ವಾಚಮ್] ವಾಣಿಯನ್ನೂ, [ಮನಃ] ಮನಸ್ಸನ್ನೂ, [ಹರದಯಮ್] ಹೃದಯವನ್ನೂ, [ಬ್ರಹ್ಮ] ವೇದಜ್ಞಾನವನ್ನೂ, [ಮೇಧಾಮ್] ಬುದ್ಧಿಯನ್ನೂ, [ಆತ್ ಜನಯನ್] ಸರ್ವರೀತಿಯಲ್ಲಿಯೂ ವರ್ಧಿಸಿಕೊಳ್ಳುತ್ತಾ, [ಭ್ರಾಜತ್ ಬ್ರಹ್ಮ] ಪ್ರಕಾಶಮಾನವಾದ ಬ್ರಹ್ಮತತ್ವವನ್ನು [ಬಿಭರ್ತಿ] ದರಿಸುತ್ತಾನೆ. [ತಸ್ಮಿನ್ ಅಧಿ] ಅವನಲ್ಲಿ [ವಿಶ್ವೇ ದೇವಾಃ] ಸಮಸ್ತ ಇಂದ್ರಿಯ ಶಕ್ತಿಗಳೂ, ದಿವ್ಯ ಗುಣಗಳೂ, [ಸಂ ಓತಾಃ] ಹಾಸು ಹೊಕ್ಕಾಗಿ ಹೆಣೆದು ಬರುತ್ತವೆ.

     ನಿಜವಾಗಿ ಬ್ರಹ್ಮಚಾರಿ-ಬ್ರಹ್ಮಚಾರಿಣಿಯರು ಬಲಿಷ್ಠವಾದ ಮನಸ್ಸು, ಪರಿಪುಷ್ಟವಾದ ವಾಣಿ, ಧೃಢವಾದ ಶರೀರ, ವಿಶಾಲವಾದ ಹೃದಯ, ಪೂರ್ಣ ವಿಕಸಿತವಾದ ಬುದ್ಧಿ, ಅದ್ಭುತ ವೇದಜ್ಞಾನ, ಪ್ರಾಣಶಕ್ತಿ – ಎಲ್ಲವನ್ನೂ ಪಡೆದುಕೊಂಡು, ಮೈವೆತ್ತ ದಿವ್ಯಶಕ್ತಿಗಳಂತೆ ವಿರಾಜಿಸುತ್ತಾರೆ. ಸತತವೂ ಸಾಧಿಸಿಕೊಂಡು ಬಂದ ಸಂಯಮದ ಮಧುರ ಮಹಿಮೆಯ ಪರಿಣಾಮದಿಂದ ಆದರ್ಶ ಮಾನವರಾಗಿ ಗುರುಕುಲದಿಂದ ಮರಳಿ ಪಿತೃಗೃಹಕ್ಕೆ ಪ್ರವೇಶಿಸುತ್ತಾರೆ. ಸಚ್ಚರಿತ್ರೆಯ ಸ್ಫುಟ ಸತ್ಯದ ಪ್ರಭಾವದಿಂದ ಸರ್ವರ ಸ್ತುತಿಗೂ ಪಾತ್ರರಾಗುತ್ತಾರೆ. ನಿಜವಾದ ಬ್ರಹ್ಮಚರ್ಯದ ಬಣ್ಣಿಸಲಾಗದ ಬಲ್ಮೆಯಿದು.

     ಕನ್ಯೆಯರ ಕಾಯ, ಪ್ರಕೃತಿನಿಯಮಾನುಸಾರ ಪುರುಷ ಶರೀರಕ್ಕಿಂತ ಬೇಗನೇ ಯೌವನದಲ್ಲಿ ಪ್ರವೇಶ ಮಾಡುವ ಕಾರಣ, ಅವರ ಬ್ರಹ್ಮಚರ್ಯದ ಕನಿಷ್ಠ ಮಿತಿ 16 ವರ್ಷಗಳದ್ದಾಗಿದೆ. ಆದರೆ, ಕನ್ಯೆಯರೇ ಆಗಲಿ, ಬ್ರಹ್ಮಚರ್ಯದ ಕನಿಷ್ಠ ಮಿತಿ ತೀರಿದೊಡನೆ, ವಿವಾಹಿತರಾಗಲೇಬೇಕೆಂಬ ಬಲವದ್ಬಂಧನವೇನೂ ಇಲ್ಲ. ಆ ಮನೋಭಾವ, ಮನೋನಿಗ್ರಹ ಸಾಮರ್ಥ್ಯ, ಯಾವುದಾದರೊಂದು ಉನ್ನತ ಧ್ಯೇಯಕ್ಕಾಗಿ ಜೀವನವನ್ನು ಮೀಸಲಿಡುವ ಧೃಢವಾದ ಭಾವನೆಯಿದ್ದಲ್ಲಿ, ತಮಗೆ ಸೂಕ್ತವೆಂದು ತೋರುವಷ್ಟು ಕಾಲ ಅಥವಾ ಜೀವನ ಪೂರ್ತ ಬ್ರಹ್ಮಚರ್ಯಾಶ್ರಮದಲ್ಲೇ ಇರಬಹುದು. ಆದರೆ ಇದು ಎಲ್ಲರಿಗೂ ಸಾಧ್ಯವಾಗುವ ವಿಷಯವಲ್ಲ.

*************

ಹಿಂದಿನ ಲೇಖನಕ್ಕೆ ಲಿಂಕ್:  http://vedajeevana.blogspot.in/2012/04/blog-post_08.html

Permanent link to this article: http://www.vedasudhe.com/%e0%b2%b5%e0%b3%87%e0%b2%a6%e0%b3%8b%e0%b2%95%e0%b3%8d%e0%b2%a4-%e0%b2%9c%e0%b3%80%e0%b2%b5%e0%b2%a8-%e0%b2%aa%e0%b2%a5-%e0%b2%ac%e0%b3%8d%e0%b2%b0%e0%b2%b9%e0%b3%8d%e0%b2%ae%e0%b2%9a%e0%b2%b0/

ನಿಮಗೆ ಕೇವಲ ೩೦ ನಿಮಿಷಗಳ ಸಮಯ ಇದೆಯೇ?

ಹಾಸನದ ಶ್ರೀ ಶಂಕರಮಠದಲ್ಲಿ ನಡೆದ ಶ್ರೀ ಶಂಕರಜಯಂತಿ ಸಂದರ್ಭದಲ್ಲಿ ಶ್ರೀ ಸುಧಾಕರಶರ್ಮರು ೧೭.೫.೨೦೧೦ ರಂದು ಮಾಡಿದ ಉಪನ್ಯಾಸ-”ಮಣೀಷಾ ಪಂಚಕ”

ನಮ್ಮ ನಂಬಿಕೆಗಳನ್ನು ಬುಡಮೇಲು ಮಾಡುವಂತಹ ವಿಶ್ಲೇಷಣೆ, ಆದರೆ ಸಮಾಧಾನಕರವಾಗಿ ಮನದಟ್ಟು ಮಾಡುವ ಸರಳಮಾತುಗಳು.

ನಿಮಗೆ ಕೇವಲ ೩೦ ನಿಮಿಷಗಳ ಸಮಯ ಇದೆಯೇ? ಗಡಿ ಬಿಡಿಯಲ್ಲಿ ಕೇಳಬೇಡಿ. ಮಲಗುವಾಗಲಾದರೂ ಅರ್ಧ ಗಂಟೆ ಈಆಡಿಯೋ ಕೇಳಿ. ನಿಮ್ಮ ಮನದಲ್ಲಿ ಮೂಡುವ ಸಂಶಯಗಳನ್ನು ವೇದಸುಧೆಗೆ ಬರೆಯಿರಿ. ಶರ್ಮರಿಂದ ಸಮಾಧಾನಕರ ಉತ್ತರಪಡೆಯಿರಿ.

* ಚಾಂಡಲ ದರ್ಶನ

* ಶೂದ್ರರು ವೇದ ಪಠಣಮಾಡಬಾರದೇ?

* ಸ್ತ್ರೀಯರು ವೇದಪಠಣಮಾಡಬಾರದೆಂದು ಶ್ರೀಶಂಕರರು ಹೇಳಿದರೆ?

* ಅದ್ವೈತ-ದ್ವೈತ-ವಿಶಿಷ್ಟಾದ್ವೈತಗಳಲ್ಲಿನ ಮೂಲ ಆಶಯವೇನು?

* ಶ್ರೀ ಶಂಕರರ ಪರಕಾಯಪ್ರವೇಶ

Permanent link to this article: http://www.vedasudhe.com/%e0%b2%a8%e0%b2%bf%e0%b2%ae%e0%b2%97%e0%b3%86-%e0%b2%95%e0%b3%87%e0%b2%b5%e0%b2%b2-%e0%b3%a9%e0%b3%a6-%e0%b2%a8%e0%b2%bf%e0%b2%ae%e0%b2%bf%e0%b2%b7%e0%b2%97%e0%b2%b3-%e0%b2%b8%e0%b2%ae%e0%b2%af/

ಹೊಸಬೆಳಕು

WE CONTINUE TO DISCUSS THE TRUTH AND MYTH ABOUT JYOTHISA IN THE NEXT EPISODE AND FOLLOWING THAT AN INTERESTING EPISODE ON MISCONCEPTIONS ABOUT VAASTU. THIS ARTICLE IN SUDHA MAGAZINE IS A RECOGNITION FOR OUR EFFORTS. DONT MISS HOSABELAKU EVERY SUNDAY MORNING 9.30 AM ON DD CHANDANA. 
ಇದೇ ಭಾನುವಾರ  ಬೆಳಿಗ್ಗೆ 9.30ಕ್ಕೆ  ಚಂದನ ದೂರದರ್ಶನದಲ್ಲಿ ’ಹೊಸಬೆಳಕು “ದಾರಾವಾಹಿ ನೋಡಿ,  ವೇದ ವಿವರಣೆಯನ್ನು     ಶ್ರೀಸುಧಾಕರಶರ್ಮರ ಸರಳ ಮಾತುಗಳಲ್ಲಿ ಕೇಳಿ. 
ಈ ಲೇಖನ ಓದಲು  ಚಿತ್ರದ ಮೇಲೆ ಕ್ಲಿಕ್ಕಿಸಿ ದೊಡ್ದದು ಮಾಡಿಕೊಂಡು ಓದಿ.

Permanent link to this article: http://www.vedasudhe.com/%e0%b2%b9%e0%b3%8a%e0%b2%b8%e0%b2%ac%e0%b3%86%e0%b2%b3%e0%b2%95%e0%b3%81/

ಈ ಜಗತ್ತೇ ಒಂದು ಸಣ್ಣ ಗೂಡು



ನಾವು “ವಸುಧೈವ ಕುಟುಂಬಕಂ ” ಎನ್ನುವ ಮಾತು ಕೇಳಿದ್ದೇವೆ. ಇಡೀ ಜಗತ್ತು ಒಂದು ಕುಟುಂಬ ಎನ್ನುವ ಕಲ್ಪನೆ ನಮ್ಮ ಋಷಿಮುನಿಗಳ ಚಿಂತನೆ ಯಾಗಿತ್ತು.  ಇತ್ತೀಚಿಗೆ ವಿಜ್ಞಾನದ ಫಲವಾಗಿ ಇಡೀ ಜಗತ್ತು ಸುಲಭ ಸಂಪರ್ಕವನ್ನು ಸಾಧಿಸಿ ಒಂದು ಪುಟ್ಟ ಹಳ್ಳಿಯಂತೆ ಕಾಣುತ್ತಿರುವುದು ಇಂದಿನ ಅನುಭವದ ಮಾತು. ದೇಶ ದೇಶಗಳ ನಡುವೆ ಸುಲಭ ಸಂಪರ್ಕ ಸಾಧ್ಯವಾಗಿದ್ದರೂ ಮನುಷ್ಯನ  ಮನ-ಮನಗಳ ನಡುವೆ, ಮನೆ-ಮನೆಗಳ ನಡುವೆ ಅದೆಂತಹ ಅಂತರ ನಿರ್ಮಾಣ ವಾಗಿದೆ!! 
ಹಾಗಾದರೆ ವೇದದ ಕಲ್ಪನೆ ಏನಿತ್ತು? ಈ ಬಗ್ಗೆ ಯಜುರ್ವೇದದ 32 ನೆ ಅಧ್ಯಾಯದ 8 ನೆ ಮಂತ್ರ ಏನು ಹೇಳುತ್ತದೆ?  ಹೊಸಬೆಳಕು ದಾರಾವಾಹಿಯಲ್ಲಿ ಈ ಬಗ್ಗೆ ಶ್ರೀ ಸುಧಾಕರ ಶರ್ಮರ ಎರಡು ನಿಮಿಷದ ಮಾತು ಕೇಳಿ. ಅದ್ಭುತ ವಾಗಿದೆ.


ಈ ಜಗತ್ತೇ ಒಂದು ಸಣ್ಣ ಗೂಡು

ಬಹುಪತ್ನಿತ್ವ ವೇದ ಸಮ್ಮತವೇ?

ಸ್ತ್ರೀಯರು ಮತ್ತು ಶೂದ್ರರು ವೇದವನ್ನು ಓದಬಾರದೆಂಬುದು ಮತಾಚಾರ್ಯರ ಅಭಿಪ್ರಾಯ! ಅಂತಾರಲ್ಲಾ , ಇದು ಸರಿಯೇ?

ಭಗವದ್ಗೀತೆಯನ್ನು  ಪಂಚಮ ವೇದ ಅಂತಾರಲ್ಲಾ?

ವೇದದಲ್ಲಿ ಶೂದ್ರರಿಗೆ ಸ್ಥಾನ?

ಸ್ತ್ರೀಯರು ವೇದಮಂತ್ರವನ್ನು ಓದಿದರೆ ಗರ್ಭಕೋಶಕ್ಕೆ ತೊಂದರೆ ಆಗುತ್ತದಂತೆ?

ವಿಧವಾ ವಿವಾಹದ ಬಗ್ಗೆ ವೇದವು ಏನು ಹೇಳುತ್ತದೆ?

Permanent link to this article: http://www.vedasudhe.com/%e0%b2%88-%e0%b2%9c%e0%b2%97%e0%b2%a4%e0%b3%8d%e0%b2%a4%e0%b3%87-%e0%b2%92%e0%b2%82%e0%b2%a6%e0%b3%81-%e0%b2%b8%e0%b2%a3%e0%b3%8d%e0%b2%a3-%e0%b2%97%e0%b3%82%e0%b2%a1%e0%b3%81/

ಹೊಸ ಮೇಲ್ ವಿಳಾಸ

ವೇದಸುಧೆಯ ಅಭಿಮಾನಿಗಳೇ ,
 
ಕಳೆದ 19.8.2012 ಭಾನುವಾರ ಉದ್ಘಾಟನೆಗೊಂಡ “ಎಲ್ಲರಿಗಾಗಿ ವೇದ ಪಾಠ” ಸಾಪ್ತಾಹಿಕ ತರಗತಿಯಲ್ಲಿ ದಿನಾಂಕ 20.8.2012 ರಂದು ಪ್ರಥಮ ಪಾಠ ನಡೆದು ಅದರಲ್ಲಿ ಮೂವತ್ತು ಜನ ಆಸಕ್ತರು ಉತ್ಸಾಹದಿಂದ ಪಾಲ್ಗೊಂಡರು. ಮುಂದಿನ ತರಗತಿಯು ದಿನಾಂಕ 26.8.2012 ರಂದು ನಡೆಯಬೇಕಿದ್ದು ಅಂದು ವೇದಾಧ್ಯಾಯೀ  ಶ್ರೀ ವಿಶ್ವನಾಥ ಶರ್ಮರು ವೇದಕ್ಕೆ ಸಂಬಂಧಿಸಿದ ಒಂದು ಮಹತ್ವದ ಸಭೆಯಲ್ಲಿ ಪಾಲ್ಗೊಳ್ಳಬೇಕಾದ್ದರಿಂದ  ಅಂದಿನ ಬದಲು ಮುಂಚಿತವಾಗಿಯೇ ದಿನಾಂಕ 23.8.2012 ರಂದು ಗುರುವಾರ ಎರಡನೇ ಪಾಠವು ನಡೆಯಿತು.  ನೇರವಾಗಿ ಪಾಲ್ಗೊಂಡವರ ಜೊತೆಗೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನರು ಅಂತರ್ ಜಾಲದಲ್ಲಿ ಪಾಠವನ್ನು ಅನುಸರಿಸುತ್ತಿರುವುದು ತಿಳಿದುಬಂದಿದೆ. ಅಲ್ಲದೆ ಹತ್ತು ಜನರು ಪಾಠವನ್ನು ಮೇಲ್ ಮೂಲಕ ಪಡೆದು ಅಭ್ಯಾಸವನ್ನು ಆರಂಭಿಸಿರುತ್ತಾರೆ. ಇನ್ನು ಮುಂದೆ    mail@vedasudhe.com  ಗೆ ಮೇಲ್ ಮಾಡಿ ತಮ್ಮ ಅಭಿಪ್ರಾಯ/ಸಲಹೆಯನ್ನು ನೀಡಲು ಕೋರುವೆ.
ವೇದ ಪಾಠ ಉದ್ಘಾಟನಾ ಸಮಾರಂಭದಲ್ಲಿ ನಡೆದ ಭರತ ನಾಟ್ಯದ ಒಂದು ಕ್ಲಿಪ್ ನ್ನು  ಅಂದಿನ ವರದಿಯ ಪುಟದಲ್ಲಿ ಈಗ ಸೇರಿಸಲಾಗಿದೆ.
-ಹರಿಹರಪುರ ಶ್ರೀಧರ್
-ಸಂಪಾದಕ

 

 

Permanent link to this article: http://www.vedasudhe.com/%e0%b2%b9%e0%b3%8a%e0%b2%b8-%e0%b2%ae%e0%b3%87%e0%b2%b2%e0%b3%8d-%e0%b2%b5%e0%b2%bf%e0%b2%b3%e0%b2%be%e0%b2%b8/

ಪಾಠ-2 ಈಶ್ವರ ಸ್ತುತಿ ಪ್ರಾರ್ಥನಾ ಮಂತ್ರದ ಅರ್ಥ ವಿವರಣೆ

ಕಳೆದ 19.8.2012 ರಂದು  ಭಾನುವಾರ ಉದ್ಘಾಟನೆಗೊಂಡ ಸಾಪ್ತಾಹಿಕ ವೇದ ಪಾಠ ತರಗತಿಯಲ್ಲಿ ದಿನಾಂಕ 20.8.2012 ರಂದು ಸೋಮವಾರ ಪ್ರಥಮ ಪಾಠವು ನಡೆಯಿತು. ದಿನಾಂಕ 26.8.2012 ಭಾನುವಾರ ಎರಡನೆಯ ಪಾಠವು ನಡೆಯ ಬೇಕಿದ್ದರೂ ಪಾಠವನ್ನು ಮಾಡುತ್ತಿರುವ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು   ಅಂದು  ವೇದಕ್ಕೆ ಸಂಬಂಧಿಸಿದ ಒಂದು ಮಹತ್ವದ ಸಭೆಯಲ್ಲಿ ಪಾಲ್ಗೊಳ್ಳ ಬೇಕಾದ್ದರಿಂದ  ಅಂದು ನಡೆಯಬೇಕಿದ್ದ ಪಾಠವನ್ನು ಮೂರು ದಿನ ಮುಂಚಿತವಾಗಿಯೇ ದಿನಾಂಕ 23.8.2012 ರಂದು ನಡೆಸಿಕೊಟ್ಟರು. ಮುಂದಿನ ತರಗತಿಯು ದಿನಾಂಕ 2.9.2012 ಭಾನುವಾರ ನಡೆಯಲಿದ್ದು ಅಲ್ಲಿಯವರಗೆ ಈ ಎರಡು ಪಾಠಗಳನ್ನು ಮನನ ಮಾಡಿಕೊಳ್ಳುವುದು ಉತ್ತಮ.

 

ಅರ್ಥ:

ಸವಿತ: ದೇವ  = ಜಗದುತ್ಪಾದಕನಾದ ಸರ್ವ ಧಾತ ಪ್ರಭುವೇ

ವಿಶ್ವಾನಿ ದುರಿತಾನಿ = ಸಮಸ್ತ ದುರ್ನಡತೆಗಳನ್ನು

ಪರಾಸುವ = ದೂರಮಾಡು

ಯದ್ = ಯಾವುದು 

ಭದ್ರಂ = ಒಳ್ಳೆಯದೋ

ತತ್ = ಅದನ್ನು

ನ: = ನಮ್ಮಲ್ಲಿ

ಆ ಸುವ = ಉಂಟುಮಾಡು

ತಾತ್ಪರ್ಯ:

ಸಕಲ ಜಗತ್ತುಗಳ ಉತ್ಪತ್ತಿಕರ್ತನೂ,ಸಮಗ್ರ ಐಶ್ವರ್ಯಯುಕ್ತನೂ, ಶುದ್ಧ ಸ್ವರೂಪನೂ, ಎಲ್ಲಾ ಸುಖಗಳನ್ನೂ ಕೊಡುವ ಹೇ ಪರಮಾತ್ಮ ನೀನು ಕೃಪೆ ಇಟ್ಟು  ನಮ್ಮ ಸಂಪೂರ್ಣ ದುರ್ಗುಣ,ದುರ್ವ್ಯಸನ,ದುರ್ನಡತೆ ಮತ್ತು ದು:ಖಗಳನ್ನು   ದೂರಮಾಡಿ, ಯಾವ ಕಲ್ಯಾಣ ಕಾರಕ ಗುಣ ಕರ್ಮ ಪದಾರ್ಥಗಳಿವೆಯೋ ಅವೆಲ್ಲವನ್ನೂ ನಮಗೆ ಕೊಡು.

Permanent link to this article: http://www.vedasudhe.com/%e0%b2%88%e0%b2%b6%e0%b3%8d%e0%b2%b5%e0%b2%b0-%e0%b2%b8%e0%b3%8d%e0%b2%a4%e0%b3%81%e0%b2%a4%e0%b2%bf-%e0%b2%aa%e0%b3%8d%e0%b2%b0%e0%b2%be%e0%b2%b0%e0%b3%8d%e0%b2%a5%e0%b2%a8%e0%b2%be-2/

ವೇದ ಪಾಠದಲ್ಲಿ ಕೇಳಿದ್ದು

ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ಹಾಸನದಲ್ಲಿ ದಿನಾಂಕ 19.8.2012 ಭಾನುವಾರ ಸಾಪ್ತಾಹಿಕ ವೇದಪಾಠವನ್ನು ಆರಂಭ ಮಾಡಿದ್ದಾರೆ. ಪತ್ರಿಕೆಗಳಲ್ಲಿ ಈ ಬಗ್ಗೆ ಸುದ್ಧಿಮಾಡಿದಾಗ ಹಲವರು ದೂರವಾಣಿ ಕರೆಮಾಡಿ ನಮಗೆ ಹಲವು ಪ್ರಶ್ನೆಗಳನ್ನು ಕೇಳಿದರು. ಅವುಗಳಲ್ಲಿ ಕೆಲವು ಇಲ್ಲಿವೆ
1.ಎಲ್ಲಾ ಜಾತಿಯವರೂ ಬರಬಹುದೇ?
2.ಹೆಂಗಸರೂ ಬರಬಹುದೇ?
3.ಯಾವ ಯಾವ ಮಂತ್ರಗಳನ್ನು ಹೇಳಿಕೊಡುತ್ತಾರೆ?
4.ಪೂಜಾ ಮಂತ್ರವನ್ನೂ ಹೇಳಿಕೊಡುತ್ತಾರಲ್ಲವೇ?
5.ಶುಲ್ಕ?
6.ಇನ್ನೂ ಹಲವು ಪ್ರಶ್ನೆಗಳು.ನನ್ನ ಮಗನಿಗೆ ಈ ವರ್ಷ ಮುಂಜಿ ಮಾಡಿದ್ದೇನೆ. ಅವನನ್ನು ಕಳಿಸುತ್ತೇನೆ…ಇತ್ಯಾದಿ…ಇತ್ಯಾದಿ….
ಎಲ್ಲಾ ಪ್ರಶ್ನೆಗಳಿಗೂ ಒಂದೇ ಉತ್ತರ.” ಬನ್ನಿ ಎಲ್ಲಾ ತಿಳಿಯುತ್ತೆ”

ಹೌದು, ಆಸಕ್ತರು ಬಂದರು. ವೇದಾಧ್ಯಾಯೀ ಶ್ರೀ ವಿಶ್ವನಾಥ ಶರ್ಮರು ಅವರ ಉಪನ್ಯಾಸದಲ್ಲಿ ಎಲ್ಲರ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದರು. ಉಪನ್ಯಾಸ ಕೇಳಿದ ಮೇಲೆ ಹಲವರು ಹೇಳಿದ್ದು..

1.ಮಂತ್ರ ಕಲಿಯೋಣ ಅಂತಾ ಬಂದೆ, ಜೀವನದ ಪಾಠ ಆರಂಭಿಸಿದ್ದಾರೆ. ನನಗಂತೂ ಆಶ್ಚರ್ಯವಾಗಿದೆ.
2.ವೇದಾಧ್ಯಯನ ಮಾಡುವವರು ಸತ್ಯವನ್ನೇ ಹೇಳಬೇಕು, ಅಹಿಂಸಾವಾದಿಗಳಾಗಿರಬೇಕು,…….ಯಾರೂ ವೇದಪಾಠದಲ್ಲಿ ಹೀಗೆ ಹೇಳಿಯೇ ಇರಲಿಲ್ಲ.
3. ಮನುಷ್ಯರೆಲ್ಲಾ ಒಂದೇ ಜಾತಿ! ಊಹಿಸಲೂ ಸಾಧ್ಯವಿಲ್ಲವಲ್ಲಾ!
4.ದೇವರ ಕಲ್ಪನೆಯೇ ವಿಭಿನ್ನ! ಪೂಜೆಯ ಕಲ್ಪನೆಯೇ ವಿಭಿನ್ನ! 33 ಕೋಟಿ ದೇವರು?

ವಿಶ್ವನಾಥಶರ್ಮರ ಉಪನ್ಯಾಸದ 5-10 ನಿಮಿಷಗಳ 5 ತುಣುಕುಗಳನ್ನು ಇಲ್ಲಿ ಕೇಳಿ.

Permanent link to this article: http://www.vedasudhe.com/%e0%b2%b5%e0%b3%87%e0%b2%a6-%e0%b2%aa%e0%b2%be%e0%b2%a0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%95%e0%b3%87%e0%b2%b3%e0%b2%bf%e0%b2%a6%e0%b3%8d%e0%b2%a6%e0%b3%81/

ವೇದಪಾಠ-1

ಭಾಗ-1

ವೇದಸುಧೆಗೆ ನಿನ್ನೆ ಒಂದು ವಿಶೇಷ ದಿನವೇ ಹೌದು.ಹಲವಾರು ದಿನಗಳಿಂದ ಬಯಸುತ್ತಿದ್ದ ವೇದಪಾಠ ಸಾಪ್ತಾಹಿಕ ತರಗತಿಯು ನಿನ್ನೆ ಉದ್ಘಾಟನೆಯಾಗಿ ಇಂದು ಮೊದಲಪಾಠ ಶುರುವಾಯ್ತು. ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ಬಹಳ ವಿಶಿಷ್ಟವಾಗಿ ಆರಂಭಿಸಿದ ವೇದಪಾಠವು ಹಲವರಿಗೆ ಅಚ್ಚರಿಯುಂಟುಮಾಡಿತು. ವೇದ ಪಾಠ ಎಂದರೆ ಹೀಗೂ ನಡೆಯುತ್ತದೆಯೇ! ಎಂಬ ಆಶ್ಚರ್ಯ ಕೆಲವರಿಗೆ. ಕೆಲವರು ಕೇಳಿದರು” ಪೂಜೆಯ ಮಂತ್ರಗಳನ್ನು ಯಾವಾಗ ಹೇಳಿಕೊಡ್ತೀರಿ? ಬಹುಪಾಲು ಜನರಿಗೆ ವಿಶ್ವನಾಥಶರ್ಮರು ಪೀಠಿಕೆಯ ರೂಪದಲ್ಲಿ ಮಾಡಿದ ಉಪನ್ಯಾಸದಿಂದ “ಇಲ್ಲಿ ನಡೆಯುವ ವೇದ ಪಾಠವೆಂದರೆ ಕೇವಲ ಮಂತ್ರ ಕಲಿಯುವುದಲ್ಲ” ಎಂಬ ಅರಿವುಂಟಾಗಿದೆ.ವೇದಸುಧೆಯ ಅಭಿಮಾನಿಗಳು ಬಯಸುವುದಾದರೆ ಶರ್ಮರು ಹೇಳಿಕೊಡುತ್ತಿರುವ ಪಾಠವನ್ನು ಪ್ರತೀ ವಾರ ಇಲ್ಲಿ ಪ್ರಕಟಿಸಲಾಗುವುದು. ಈ ಬಗ್ಗೆ ಫೀಡ್ ಬ್ಯಾಕ್ ಇದ್ದರೆ ಉತ್ತಮ.

ಕೊಂಡಿಯಲ್ಲಿರುವ ಆಡಿಯೋ ಕ್ಲಿಪ್ ನಿಮಗೆ ಮೇಲ್ ಮಾಡಬೇಕೇ? ನನಗೊಂದು  ಮನವಿ ಮೇಲ್ ಕಳಿಸಿ.ಕೂಡಲೇ  ಮೇಲ್ ಮಾಡುವೆ.

ಭಾಗ-2

ಭಾಗ-3

Permanent link to this article: http://www.vedasudhe.com/%e0%b2%b5%e0%b3%87%e0%b2%a6%e0%b2%aa%e0%b2%be%e0%b2%a0-1-%e0%b2%ad%e0%b2%be%e0%b2%97-1/

Older posts «