Monthly Archive: July 2012

ಸತ್ಯವೇ ನಮ್ಮ ಶಕ್ತಿ

 

* ದೇವರಲ್ಲಿ ಹರಕೆ ಮಾಡುವುದರಿಂದ ಸಮಸ್ಯೆ ಪರಿಹಾರವಾಗುತ್ತದೆಯೇ?

* ಪ್ರಾರ್ಥನೆ ಎಂದರೆ ನಾವು ಮಾಡುವ ಸತ್ಯ ಸಂಕಪ

* ಸಂಕಲ್ಪವು ಸತ್ ಸಂಕಲ್ಪವಾಗಬೇಕಾದರೆ ಸಂಕಲ್ಪದಂತೆ ನಾವು ನಡೆಯಬೇಕು

* ನಮ್ಮ ಸಂಕಲ್ಪದಂತೆ ನಾವು ನಡೆದಾದ ಫಲ ಖಚಿತ.

* ನಮ್ಮ ಸತ್ ಸಂಕಲ್ಪದಿಂದ ನಮ್ಮಲ್ಲಿ ವಿಶ್ವಾಸವು ಹೆಚ್ಚುತ್ತದೆ

* ಗೊಡ್ಡು ನಂಬಿಕೆ ಬಿಡಿ

* ವಂಚನೆ ವಿರುದ್ಧವಾಗಿ ಹೋರಾಡಿ-ಇದು ವೇದದ ಕರೆ

* ನೂರು ವರ್ಷಗಳು ನಮ್ಮ ಕರ್ತವ್ಯವನ್ನು ಮಾಡುತ್ತಾ ಬಾಳುತ್ತೇವೆಂಬುದು ನಮ್ಮ ಸಂಕಲ್ಪವಾಗಲಿ.

Permanent link to this article: http://www.vedasudhe.com/%e0%b2%b8%e0%b2%a4%e0%b3%8d%e0%b2%af%e0%b2%b5%e0%b3%87-%e0%b2%a8%e0%b2%ae%e0%b3%8d%e0%b2%ae-%e0%b2%b6%e0%b2%95%e0%b3%8d%e0%b2%a4%e0%b2%bf/

ಜನರು ದೇವಾಲಕ್ಕೆ ಯಾಕೆ ಹೋಗ್ತಾರೇ?

* ಜನರು ದೇವಾಲಕ್ಕೆ ಯಾಕೆ ಹೋಗ್ತಾರೇ?
* ಪಾಪ ಪ್ರಜ್ಞೆ ಕಾಡುತ್ತದೆಯೇ?

* ಮಾಡಿದ ಪಾಪವನ್ನುನ್ ಅನುಭವಿಸಿಯೇ ತೀರಬೇಕು

* ಮುಂಡನ ಮತ್ತು ಉರುಳು ಸೇವೆ ಭಕ್ತಿಯ ಆಚರಣೆಯೇ?

* ಒಬ್ಬ ಹಿಂಸಾವಾದಿಯು ಬುದ್ಧನ ಅನುಯಾಯಿ ಎಂದರೆ ಅದಕ್ಕೆ ಅರ್ಥವಿದೆಯೇ?

* ಭಕ್ತಿ ಎಂದರೇನು?

* ಭಗವಂತನ ದೈವೀ ಗುಣವನ್ನು ನಮ್ಮದಾಗಿಸಿಕೊಳ್ಳುವುದೇ ಭಕ್ತಿ

* ನಮ್ಮದು ನಿಜ ಭಕ್ತಿಯೋ ? ನಾಟಕವೋ? ನಮ್ಮೊಳಗೆ ಪ್ರಶ್ನೆ ಏಲ ಬೇಕು

*ಯಜ್ಞ ಎಂದರೇನು?

* ಯಜ್ಞ ಎಂದರೆ ಶ್ರೇಷ್ಠತಮ ಕರ್ಮ

* ನಾವು ಮಾಡುವ ಕೆಲಸವು ಅತ್ಯ್ತ್ತಮವಾಗಿದ್ದರೆ ಅದೇ ಯಜ್ಞ

Permanent link to this article: http://www.vedasudhe.com/%e0%b2%9c%e0%b2%a8%e0%b2%b0%e0%b3%81-%e0%b2%a6%e0%b3%87%e0%b2%b5%e0%b2%be%e0%b2%b2%e0%b2%95%e0%b3%8d%e0%b2%95%e0%b3%86-%e0%b2%af%e0%b2%be%e0%b2%95%e0%b3%86-%e0%b2%b9%e0%b3%8b%e0%b2%97%e0%b3%8d/

Audio

ಋತಂಭರಾ ಪ್ರಜ್ಞಾ -ಹಾಗೆಂದರೇನು?

ಋತಂಭರಾ ಪ್ರಜ್ಞಾ -ಹಾಗೆಂದರೇನು?

Permanent link to this article: http://www.vedasudhe.com/%e0%b2%8b%e0%b2%a4%e0%b2%82%e0%b2%ad%e0%b2%b0%e0%b2%be-%e0%b2%aa%e0%b3%8d%e0%b2%b0%e0%b2%9c%e0%b3%8d%e0%b2%9e%e0%b2%be-%e0%b2%b9%e0%b2%be%e0%b2%97%e0%b3%86%e0%b2%82%e0%b2%a6%e0%b2%b0%e0%b3%87/

ಒಂದು ವಿಭಿನ್ನವಾದ, ವಿಶಿಷ್ಟವಾದ ವೇದೋಕ್ತ ವಿವಾಹ

ವಿವಾಹ ಆಮಂತ್ರಣ ಓದಲು:

Right clik on invitation , open link in new window, clik on image,ಈಗ  ಅಕ್ಷರ ದೊಡ್ದದು ಮಾಡಿ ಓದಬಹುದು


ಈ ದಿನಗಳಲ್ಲಿ ಮದುವೆ ಎಂದಾಗ  ಕಲ್ಯಾಣ ಮಂಟಪದಲ್ಲಿ  ವಧು ವರರ ಬಂಧು ಮಿತ್ರರು ಅಪಾರ ಸಂಖ್ಯೆಯಲ್ಲಿ ಸೇರಿದಾಗ ವಿವಾಹ ಮಂಟ ಪದಲ್ಲಿ ನಡೆಯುವ ಕಲಾಪಗಳನ್ನು ನೋಡಲು ಹಲವರಿಗೆ ವ್ಯವಧಾನವೇ ಇರುವುದಿಲ್ಲ. ಅಪರೂಪಕ್ಕೆ ಸಿಕ್ಕ ಬಂಧುಮಿತ್ರರೊಡನೆ ಹರಟೆ ಹೊಡೆಯ ಬೇಡವೇ? ತಪ್ಪೇನಿಲ್ಲಾ ಬಿಡಿ. ಆದರೆ  ಈ ವಧುವರರಿಗೆ ಮಾತ್ರ ಜೀವನದಲ್ಲಿ  ಇದು  ಅತೀ ಮಹತ್ವದ ಸಂದರ್ಭ. ಇದರ ಔಚಿತ್ಯ ಹಲವರಿಗೆ ಅರ್ಥವಾಗುವುದೇ ಇಲ್ಲ. ಹರಟೆ ಹೊಡೆಯೋಕೆ ಮದುವೆ ಮಂತಪವೇ ಬೇಕಾ ? ನೀವೇ ಹೇಳಿ. ಇವೆಲ್ಲಾ ರೂಢಿಯಾಗಿ ಬಿಟ್ಟಿದೆ. ಪುರೋಹಿತರು ಮಂತ್ರ ಹೆಳ್ತಾರೆ  , ” ಮಮ” ಅಂತ ಹೇಳಿ ಅಂತಾರೆ. ವರನ/ವಧುವಿನ/ತಂದೆಯ/ತಾಯಿ ಯಾರಿಗೆ ಮಂತ್ರ ಸಂಬಂಧಿಸಿರುತ್ತೋ ಅವರು “ಮಮ”  ಅಂತಾ ಅಂತಾರೆ, ಕಿವಿಗೆ ಬೀಳದಿದ್ದರೆ  ಪುರೋಹಿತರು ” ಮಮ” ಅಂತಾ ಹೇಳಿ ವಿಧಿಯನ್ನು ಮುಗಿಸಿ ಬಿಡುತ್ತಾರೆ. ವೈದಿಕ  ವಿಧಿಗೆ ಹೊರತಾದ ಹಲವು ಕಾರ್ಯಕ್ರಮಗಳು ಮದುವೆ ಮಂಟಪದಲ್ಲಿ ನಡೆಯುತ್ತೆ. ವೀಡಿಯೋ ತೆಗೆಯುವವರು  ಎಲ್ಲವನ್ನೂ ಸೆರೆ ಹಿಡಿಯುತ್ತಾರೆ. ಮದುವೆ ಆದ ಮೇಲೆ ನಾಲ್ಕಾರು ದಿನ  ವೀಡಿಯೋ ವನ್ನು ಮತ್ತು ಆಲ್ಬಮ್ ನ್ನು  ನೋಡಿ ಆ ನಂತರ  ಬೇಸರ ವಾದರೆ ಅದರ ಜಾಗಕ್ಕೆ ಸೇರಿಸುತ್ತಾರೆ. ಅಲ್ಲಿಗೆ ಮದುವೆಯ ಆಟ  ಮುಗಿಯುತ್ತೆ.

  ವಿವಾಹ ಎಂಬುದು ಜೀವನದಲ್ಲಿ    ಎಂತಹ ಮಹತ್ವ ಪೂರ್ಣ ಘಟ್ಟ! ಅದಕ್ಕೆ ಕೊಡುತ್ತಿರುವ ಮಹತ್ವ?  ಒಂದು ಮದುವೆಯಲ್ಲಿ  ಅಕ್ಕಿಗೆ  ನಾಲ್ಕಾರು ರೀತಿಯ ಬಣ್ಣ ಹಾಕಿ ಅದನ್ನು ವಧು ವರರ ತಲೆಯ ಮೆಲೆ ಸುರಿಸಿದಾಗ ಅಲ್ಲಿ ಚೆಲ್ಲಾಡಿದ್ದ ಅಕ್ಕಿ     ಕಂಡು ಬೇಸರಗೊಂಡೆ. ಐದಾರು ಕೆ.ಜಿ.ಅಕ್ಕಿ! ಬಣ್ಣ  ಬಳಿದಿದೆ! ಹಕ್ಕಿ ತಿಂದರೂ ಸಾಯುತ್ತವೆ! ಎಲ್ಲವೂ ತಿಪ್ಪೆಯ ಪಾಲು! ಇದು ನಾವು  ಕಷ್ಟ  ಪಟ್ಟು  ಅನ್ನ ಬೆಳೆದ ರೈತನಿಗೆ ನಾವು ಕೊಡುವ ಬೆಲೆ!

ಈಗ ರೂಡಿಯಲ್ಲಿರುವ ವಿವಾಹದ ಹಲವು ಆಚರಣೆಗಳು ವೇದೋಕ್ತವಲ್ಲ! ಆದರೂ ನಮ್ಮ ಹಿಂದಿನವರು ಆಚರಿಸಿಕೊಂಡು ಬಂದರು, ನಾವೂ ಆಚರಿಸುತ್ತೇವೆ.ಆದರೆ ಇಲ್ಲೊಂದು ಮದುವೆಯ ಕರೆಯೋಲೆ ನನ್ನ ಕೈ ತಲುಪಿದೆ. ಎಲ್ಲವೂ ವೇದೋಕ್ತ. ವಿವಾಹವಾಗುತ್ತಿರುವ ವಧುವಿಗೆ ಶಾಸ್ತ್ರೋಕ್ತ ಉಪನಯನ ವಾಗಿದೆ. ವಧು ವರರು ವೇದೋಕ್ತವಾಗಿ ವಿವಾಹ ಸಂಸ್ಕಾರವನ್ನು ಪಡೆಯುತ್ತಿದ್ದಾರೆ. ಆಸಕ್ತರು “ವೇದೋಕ್ತವಿವಾಹವನ್ನು” ಬಂದು ವೀಕ್ಷಿಸಬಹುದು.
-ಹರಿಹರಪುರ ಶ್ರೀಧರ್.

Permanent link to this article: http://www.vedasudhe.com/%e0%b2%92%e0%b2%82%e0%b2%a6%e0%b3%81-%e0%b2%b5%e0%b2%bf%e0%b2%ad%e0%b2%bf%e0%b2%a8%e0%b3%8d%e0%b2%a8%e0%b2%b5%e0%b2%be%e0%b2%a6-%e0%b2%b5%e0%b2%bf%e0%b2%b6%e0%b2%bf%e0%b2%b7%e0%b3%8d%e0%b2%9f/

ದೇವಾಲಯಗಳ ಹಿನ್ನೆಲೆ

ನಮ್ಮ ದೇಶದಲ್ಲಿ ರಾಜ ಮಹಾರಾಜರ ಕಾಲದಿಂದಲೂ ದೇವಾಲಯಗಳನ್ನು ಕಟ್ಟುವುದು, ಕೆರೆ ಕಟ್ಟೆಗಳನ್ನು ನಿರ್ಮಿಸುವುದು, ಕೊಳಗಳನ್ನು ನಿರ್ಮಿಸುವುದು, ಅರಳೀಕಟ್ಟೆಗಳ ನಿರ್ಮಾಣ, ತೋಪು ಬೆಳೆಸುವುದು,ಗೋಮಾಳಗಳನ್ನು ಬಿಡುವುದು, ಸಾಲು ಮರಗಳನ್ನು ನೆಡುವುದು,ಛತ್ರಗಳನ್ನು ಸ್ಥಾಪಿಸುವುದು, ಮಠ ಮಂದಿರಗಳಿಗೆ ಪ್ರೋತ್ಸಾಹಿಸುವುದು…ಮುಂತಾದ ಹಲವು ಸತ್ಕಾರ್ಯಗಳನ್ನು ನಮ್ಮ ಪೂರ್ವಜರು ಮಾಡಿದ್ದಾರೆ. ನನ್ನ ಸ್ವಂತ ಊರಾದ ಹರಿಹರಪುರವನ್ನು ಎರಡನೇ ಹರಿಹರಮಹಾರಾಜನು ಮಾಧವಾಧ್ವರಿ ಎಂಬ ವೇದ ವಿದ್ವಾಂಸನಿಗೆ ಅವನ ವೇದಜ್ಞಾನಕ್ಕೆ ಮನ್ನಣೆ ಕೊಟ್ಟು ದಾನವಾಗಿ ನೀಡಿದ್ದನು, ಎಂಬ ಶಾಸನ ಇದೆ.ಮಾಧವಾಧ್ವರಿ ಎಂಬ ವೇದವಿದ್ವಾಂಸನಿದ್ದ ಊರಿನಲ್ಲಿ ನಾನು ಜನಿಸಿದ್ದೇನೆ, ಎಂಬುದರಿಂದಲೇ ನನಗೆ ಸಂತೋಷವಿದೆ. ಆದರೆ ಮಾಧವಾಧ್ವರಿಯ ನಂತರ ನಮ್ಮೂರಿನಲ್ಲಿ ವೇದಜ್ಞಾನ ಯಾವ ಕಾರಣಕ್ಕೆ ಹಿನ್ನಡೆ ಪಡೆಯಿತು, ಎಂಬಬಗ್ಗೆ ಅರಿವಿಲ್ಲ, ಆದರೆ ನಿಜವಾದ ವೇದಜ್ಞಾನ ಮರೆಯಾಗುತ್ತಾ,ಪುರಾಣದ ಮೇಲುಗೈಯ್ಯಾದಂತೆ ತೋರುವುದು ಸತ್ಯ.ಏನೇ ಇರಲಿ, ದೇವಾಲಯಗಳ ಸ್ಥಾಪನೆಯ ಹಿಂದಿನ ಉದ್ಧೇಶವನ್ನು ಶ್ರೀ ಸುಧಾಕರಶರ್ಮರ ಮಾತುಗಳಲ್ಲಿ ಕೇಳೋಣ. ಅವರ ಮಾತುಗಳು ನಿಷ್ಟುರವಾಗಿರುತ್ತವೆ. ಕಹಿಸತ್ಯವನ್ನು ಅರಗಿಸಿಕೊಳ್ಳುವುದು ಕಷ್ಟವಾದರೂ ನಿಜವನ್ನು ಅರಿತುಕೊಳ್ಳಲೇ ಬೇಕು.

Permanent link to this article: http://www.vedasudhe.com/%e0%b2%a6%e0%b3%87%e0%b2%b5%e0%b2%be%e0%b2%b2%e0%b2%af%e0%b2%97%e0%b2%b3-%e0%b2%b9%e0%b2%bf%e0%b2%a8%e0%b3%8d%e0%b2%a8%e0%b3%86%e0%b2%b2%e0%b3%86/

Video

ದೇವರಿಗೆ ಹರಕೆಹೊತ್ತರೆ ಕೆಲಸ ಆಗುತ್ತದೆಯೇ?

Permanent link to this article: http://www.vedasudhe.com/%e0%b2%a6%e0%b3%87%e0%b2%b5%e0%b2%b0%e0%b2%bf%e0%b2%97%e0%b3%86-%e0%b2%b9%e0%b2%b0%e0%b2%95%e0%b3%86%e0%b2%b9%e0%b3%8a%e0%b2%a4%e0%b3%8d%e0%b2%a4%e0%b2%b0%e0%b3%86-%e0%b2%95%e0%b3%86%e0%b2%b2%e0%b2%b8/

ನಮ್ಮೊಡನೆ ಶ್ರೀ ಸುಧಾಕರಶರ್ಮರು


ವೇದಾಧ್ಯಾಯೀ ಶ್ರೀ  ಶ್ರೀ ಸುಧಾಕರಶರ್ಮರು ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ತೀವ್ರ ಬಳಲಿದ್ದರು. ಅವರ ಸ್ಥಿತಿಯನ್ನು  ಕಳೆದ ಹತ್ತು ತಿಂಗಳ ಹಿಂದೆ  ಪ್ರತ್ಯಕ್ಷ ನೋಡಿದ ನನ್ನ ತಂಗಿ ಹೇಳುತ್ತಾಳೆ ” ಅವರ ಅಂದಿನ ಸ್ಥಿತಿಯಲ್ಲಿ ಅವರು ಬದುಕುಳಿಯುತ್ತಾರೆಂಬ ನಂಬಿಕೆ ನನಗಿರಲಿಲ್ಲ! ಶರ್ಮರ ಸಂದರ್ಶನ ಮಾಡಲು ಹೋಗುವೆನೆನ್ನುತ್ತೀಯಲ್ಲಾ!! ಅವರು ಮಾತನಾಡಬಲ್ಲರೇ?

ಅಬ್ಭಾ! ನನ್ನಂತವನಾಗಿದ್ದರೆ ನನ್ನ ಬದುಕಿನ ಆಸೆ ಮರೆಯುತ್ತಿದ್ದೆ. ಅಷ್ಟು ತೀವ್ರ ಸ್ಥಿತಿಯಿಂದ ಚೇತರಿಸಿಕೊಂಡು ಈಗಾಗಲೇ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರಷ್ಟೇ ಅಲ್ಲಾ, ಈ ಸ್ಥಿತಿಯಲ್ಲೂ  ಚಂದನದಲ್ಲಿ ನಡೆಯುವ “ಹೊಸ ಬೆಳಕು” ದಾರವಾಹಿಗಾಗಿ  ಮುಂದಿನ ಹಲವು  ಎಪಿಸೋಡ್ ಗಳಿಗಾಗಿ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ, ಅಷ್ಟೇ ಅಲ್ಲಾ, ಮುಂದಿನ       5-8-2012 ರಂದು ಒಂದು ವೇದೋಕ್ತ ವಿವಾವಹವನ್ನು ಸ್ವತ: ಶರ್ಮರು ನಡೆಸಿಕೊಡಲಿದ್ದಾರೆ. ಮೊನ್ನೆ ಅವರನ್ನು ಭೇಟಿಯಾಗಿ ಹಲವು ವಿಚಾರಗಳ ಬಗ್ಗೆ ವೀಡಿಯೋ ತೆಗೆದೆ. ಇನ್ನು ಒಂದೊಂದಾಗಿ ಶರ್ಮರ  ಆಡಿಯೋ /ವೀಡಿಯೋ ಕ್ಲಿಪ್ ಗಳನ್ನು ಪ್ರಕಟಿಸಲಾಗುವುದು.  ನಮ್ಮ  ನೆಮ್ಮದಿಯ     ಬದುಕಿಗೆ  ಅಗತ್ಯವಾದ ಹಲವು ಅಂಶಗಳನ್ನು ಶ್ರೀ ಶರ್ಮರು ವೇದಸುಧೆಯ  ಓದುಗರೊಡನೆ ಹಂಚಿಕೊಂಡಿದ್ದಾರೆ. ವೇದಸುಧೆಯ ಅಭಿಮಾನಿಗಳು ಎಂದಿನಂತೆ  ಈ ವಿಚಾರಗಳನ್ನು ಕೇಳಿ  ನಿಮಗೆ ಉಂಟಾಗಬಹುದಾದ ಅನುಮಾನಗಳನ್ನು/ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು  ವೇದಸುಧೆಯಲ್ಲಿ ಹಂಚಿಕೊಂಡರೆ ಶ್ರೀ ಶರ್ಮರು ಉತ್ತರಿಸುವರು

Permanent link to this article: http://www.vedasudhe.com/%e0%b2%a8%e0%b2%ae%e0%b3%8d%e0%b2%ae%e0%b3%8a%e0%b2%a1%e0%b2%a8%e0%b3%86-%e0%b2%b6%e0%b3%8d%e0%b2%b0%e0%b3%80-%e0%b2%b8%e0%b3%81%e0%b2%a7%e0%b2%be%e0%b2%95%e0%b2%b0%e0%b2%b6%e0%b2%b0%e0%b3%8d%e0%b2%ae/

ತಾನು ಮಾಡಿದ ಕರ್ಮದ ಫಲವನ್ನು ತಾನು ಅನುಭವಿಸಲೇ ಬೇಕು


* ಸಂಚಿತ,ಪ್ರಾರಬ್ಧ ಮತ್ತು ಆಗಾಮಿ ಕರ್ಮಗಳೆಂದರೇನು?

* ನಮ್ಮ ನಮ್ಮ ಯೋಗ್ಯತೆಗನುಗುಣವಾಗಿ ಮುಂದಿನ ಜನ್ಮ

ನಿರ್ಧಾರಿತವಾಗಲಿದೆಯೇ?

* ಸಾವಿಗೆ ಹೆದರ ಬೇಕೆ?

* ನಮ್ಮ ಆಯಸ್ಸು ಪೂರ್ವ ನಿರ್ಧಾರಿತವೇ?

* ಇನ್ನೂ ಹಲವು    ವಿಚಾರಗಳ    ಮೇಲೆ ಬೆಳಕು ಚೆಲ್ಲಿದ್ದಾರೆ

ಶ್ರೀ ಸುಧಾಕರ ಶರ್ಮರು

Permanent link to this article: http://www.vedasudhe.com/%e0%b2%a4%e0%b2%be%e0%b2%a8%e0%b3%81-%e0%b2%ae%e0%b2%be%e0%b2%a1%e0%b2%bf%e0%b2%a6-%e0%b2%95%e0%b2%b0%e0%b3%8d%e0%b2%ae%e0%b2%a6-%e0%b2%ab%e0%b2%b2%e0%b2%b5%e0%b2%a8%e0%b3%8d%e0%b2%a8%e0%b3%81/

Older posts «